ಆಟೋ ರಿಕ್ಷಾ, ಟ್ಯಾಕ್ಸಿ ಖರೀದಿಸಲು 3,00,000 ಸಹಾಯಧನ. Vehicle subsidy scheme in karnataka.

ಆತ್ಮೀಯ ವೀಕ್ಷಕರೇ ನಿಮಗೆಲ್ಲ ನಮಸ್ಕಾರ. ನೀವು ವಾಹನವನ್ನು ಖರೀದಿಸುವ ಚಿಂತೆಯಲ್ಲಿದ್ದೀರಾ? ಇಲ್ಲಿದೆ ನಿಮಗೆ ಸರ್ಕಾರದಿಂದ ಸುವರ್ಣ ಅವಕಾಶ. Vehicle subsidy scheme in karnataka.

ಕರ್ನಾಟಕ ರಾಜ್ಯ ಸರ್ಕಾರದಿಂದ ವೆಹಿಕಲ್ ಸಬ್ಸಿಡಿ ಸ್ಕೀಮ್ ಬಿಡುಗಡೆ ಮಾಡಿದ್ದು ಟ್ಯಾಕ್ಸಿ ಸರಕು ವಾಹನಗಳು ಮತ್ತು ಆಟೋರಿಕ್ಷಾ ವಾಹನಗಳನ್ನು ಖರೀದಿಸಲು, ಅಲ್ಪಸಂಖ್ಯಾತರ ಯೋಜನೆ ಅಡಿಯಲ್ಲಿ ಸ್ವಾವಲಂಬಿ ಸಾರಥಿ ಯೋಜನೆ ಎಂದು ಸಹಾಯಧನ ನೀಡಲು ಯೋಜನೆ ಆರಂಭಿಸಿದೆ.

Vehicle subsidy scheme in karnataka, ಸಹಾಯಧನ.

ಯೋಜನೆಯಲ್ಲಿ ವಾಹನವನ್ನು ತೆಗೆದುಕೊಳ್ಳಲು ವಾಹನದ ಒಟ್ಟು ಮೊತ್ತದಲ್ಲಿ ಶೇಕಡ 50ರಷ್ಟು ಅಂದರೆ ಸುಮಾರು ಮೂರು ಲಕ್ಷದವರೆಗೆ ಸಹಾಯಧನವನ್ನು ನೀಡಲು ಈ ಯೋಜನೆ ಪೂರಕವಾಗಿದೆ.

ಈ ಯೋಜನೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮತದಿಂದ ಆಯೋಜಿಸಲಾಗಿದ್ದು ಅರ್ಜಿದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ Laptop ವಿತರಣೆ. Free laptop scheme 2023

ಅರ್ಜಿದಾರರು ಈ ಯೋಜನೆ ಗೆ ಫಲಾನುಭವಿಯಾಗಲು ಯಾವೆಲ್ಲಾ ಅರ್ಹತೆಗಳು ಬೇಕು ಎಂದು ನೋಡುವುದಾದರೆ,

  • ಅರ್ಜಿದಾರ ಅಥವಾ ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರತಕ್ಕದ್ದು.
  • ಅರ್ಜಿದಾರ ಕಡ್ಡಾಯವಾಗಿ 18 ರಿಂದ 55 ವರ್ಷಗಳ ಒಳಗೆ ವಯೋಮಿತಿ ಹೊಂದಿರಬೇಕು.
  • ಅರ್ಜಿದಾರರ ಒಟ್ಟು ಕುಟುಂಬದ ವಾರ್ಷಿಕ ಆದಾಯ 4.50,000 ಮೀರಿರಬಾರದು.
  • ಕಡ್ಡಾಯವಾಗಿ ಆರ್ ಟಿ ಓ ಸಂಸ್ಥೆಯಿಂದ ಚಾಲನಾ ಪರವಾನಗಿ ಅಥವಾ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು.
  • ಮತ್ತೆ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇರಬಾರದು ಸಂಬಳವನ್ನು ತೆಗೆದುಕೊಳ್ಳುತ್ತಿರಬಾರದು.
  • ಅಲ್ಲದೆ ಬೇರೆ ಯಾವುದೇ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ತೆಗೆದುಕೊಂಡಿರಬಾರದು.
  •  
  • ಈ ಎಲ್ಲಾ ಮಾಹಿತಿಗಳು ಸತ್ಯತೆ ಇರಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಎಂದರೆ. ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಐಡೆಂಟಿಟಿ ಪ್ರೂಫ್ ಗೋಸ್ಕರ ಮತ್ತು ನಿವಾಸದ ಪುರಾವೆಗೋಸ್ಕರ ಆಧಾರ್ ಕಾರ್ಡ್ ಹೊಂದಿರಬೇಕು. ಮತ್ತು ಯಾವ ವಾಹನ ತೆಗೆದುಕೊಳ್ಳುತ್ತೇವೆ ಅದರ ಕೊಟೇಶನ್ ಹೊಂದಿರಬೇಕು. ಇತ್ತೀಚೆಗೆ ತೆಗೆಸಿದ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ ಇರಬೇಕು.

ಇದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಾಗಿದ್ದು, ನೀವು ಕೆಳಗೆ ಕೊಟ್ಟಿರುವ ಮಾಹಿತಿಯೊಂದಿಗೆ ಮತ್ತು ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಉಚಿತ ಟ್ರೈನಿಂಗ್. Dairy farming and vermicompost manufacturing training.

ಅಧಿಕೃತ ವೆಬ್ಸೈಟ್ ಆನ್ಲೈನ್ ಅರ್ಜಿ ಸಲ್ಲಿಸಲು — kmdc.karnataka.gov.in

ಇಂದಿನಿಂದ ಮತ್ತೆ ಮುಂಗಾರು ಮಳೆ ಈ ಜಿಲ್ಲೆಗಳಿಗೆ ಆರಂಭ. Mansoon rain