ರೇಷನ್ ಕಾರ್ಡ್ ಈಕೆವೈಸಿ ಮಾಡಿಸಿಲ್ಲ ಅಂದ್ರೆ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಬರಲ್ಲ. ಈಗಲೇ ಸ್ಟೇಟಸ್ ಚೆಕ್ ಮಾಡಿ. Ration card ekyc

ಆತ್ಮೀಯ ವೀಕ್ಷಕರೇ ನಿಮಗೆಲ್ಲ ನಮಸ್ಕಾರಗಳು ಈ ಲೇಖನದಲ್ಲಿ ಪಡಿತರ ಚೀಟಿಯ ಈಕೆ ವೈ ಸಿ ( ration card ekyc ) ಮಾಡಿಸುವ ಕುರಿತು ಮತ್ತು ಅದರ ಸ್ಟೇಟಸ್ ತಿಳಿಯುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಬಹು ಮುಖ್ಯ ಆದ ಒಂದು ಪುರಾವೆಯಾಗಿದ್ದು, ಪಡಿತರ ಚೀಟಿ ಹೊಂದಿದೆ ಕುಟುಂಬಕ್ಕೆ ಸರ್ಕಾರಗಳಿಂದ ನಾನಾ ರೀತಿಯ ಯೋಜನೆಗಳ ಲಾಭಾಂಶವನ್ನು ಪಡೆಯಲು ಮತ್ತು ಆರೋಗ್ಯ ಸೇವೆ ತುರ್ತು ಸೇವೆಗಳನ್ನು ಪಡೆಯಲು ಬಹು ಉಪಯುಕ್ತವಾಗಿದೆ.

ಆಗಸ್ಟ್ ತಿಂಗಳ anna ಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್.

Ration card ekyc status ಚೆಕ್ ಮಾಡುವ ವಿಧಾನ.

ಇದನ್ನೂ ಓದಿ : gruha lakshmi ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಮತ್ತು ವಿಧಾನ

ಪಡಿತರ ಚೀಟಿ ಹೊಂದಿರುವಂತಹ ಕುಟುಂಬಗಳು, ಇದರಿಂದ ಅನೇಕ ಅನೇಕ ಸವಲತ್ತುಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆಯುತ್ತಿದ್ದು, ಇತ್ತೀಚಿಗೆ ರಾಜ್ಯ ಸರ್ಕಾರದಿಂದ ಘೋಷಣೆಗೊಂಡಂತಹ ಗೃಹಲಕ್ಷ್ಮಿ ಯೋಜನೆ ಗೃಹಜ್ಯೋತಿ ಯೋಜನೆ ಅನ್ನ ಭಾಗ್ಯ ಯೋಜನೆ ಮತ್ತು ಶಕ್ತಿ ಯೋಜನೆಗಳಿಗೆ ಪಡಿತರ ಚೀಟಿ ಕಡ್ಡಾಯಗೊಳಿಸಲಾಗಿದೆ.

ಪಡಿತರ ಚೀಟಿ ಹೊಂದಿರುವಂತಹ ಎಲ್ಲಾ ಸದಸ್ಯರು ಈ ಕೆ ವೈ ಸಿ ಯನ್ನು ಕಡ್ಡಾಯವಾಗಿ ಮಾಡಿಸಬೇಕಾಗಿದ್ದು, ಮಾಡಿಸದೆ ಇದ್ದಲ್ಲಿ ನೀವು ಯಾವುದೇ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಮತ್ತು ಅದರ ಲಾಭವನ್ನು ಪಡೆಯಲು ಅರ್ಹರ ಆಗುವುದಿಲ್ಲ.

ಇದನ್ನೂ ಓದಿ : ಗೃಹ ಲಕ್ಷ್ಮಿ ಹಣ ಜಮಾ ಆಗಿರುವ ಮೆಸೇಜ್ ನಿಮಗೆ ಬಂತಾ? ಚೆಕ್ ಮಾಡಿ.

Ration card ಇಲ್ಲದೆ ಇದ್ದರೆ ಯಾವುದೇ ಯೋಜನೆ ಹಣ ಸಿಗಲ್ಲ.

ಒಂದು ವೇಳೆ ನೀವು ಇನ್ನೂ ಸಹ ಪಡಿತರ ಚೀಟಿಗೆ ಈ ಕೆ ವೈ ಸಿ ( ration card ekyc ) ಮಾಡಿಸಲ್ಲ ಅಂದಲ್ಲಿ ಕೂಡಲೇ ಹತ್ತಿರದ ಪಡಿತರ ಚೀಟಿ ವಿತರಣೆ ಕೇಂದ್ರದಲ್ಲಿ, ಮಾಡಿಸಿಕೊಳ್ಳಿ.
ನಿಮ್ಮ ಪಡಿತರ ಚೀಟಿ ಈ ಕೆ ವೈ ಸಿ ಲಿಂಕ್ ಆಗಿದೆಯಾ ಎಂದು ನೋಡಲು ಈ ಕೆಳಗೆ ಕೊಟ್ಟಿರುವ ಮಾರ್ಗ ಅನುಸರಿಸಿ.

ಈ ವೆಬ್ಸೈಟ್ ಗೆ ಬೇಟಿ ನೀಡಿ, ಅಲ್ಲಿ ನಿಮಗೆ ಸರ್ವೀಸಸ್ ಎಂಬ ಅಯ್ಕೆ ಇರುತ್ತದೆ. ಅದರ ಮೇಲೆ ಒತ್ತಿ ಆಗ ನಿಮಗೆ ಈ ಸ್ಟೇಟಸ್ ( e status ) ಎಂಬ ಆಯ್ಕೆ ಮೇಲೆ ಒತ್ತಿ.
ನಂತರ ಅಲ್ಲಿ dbt status ( ಡಿಬಟಿ ಸ್ಟೇಟಸ್) ಆಯ್ಕೆ ಮೇಲೆ ಒತ್ತಿ. ಅದಾದ ನಂತರ ನಿಮ್ಮ ಜಿಲ್ಲೆಯನ್ನು ನಮೂದಿಸಿ , ಸ್ಟೇಟಸ್ ಆಫ್ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ.

https://ahara.kar.nic.in/Home/EServices

ಅಲ್ಲಿ select verification emba ಆಯ್ಕೆಯಲ್ಲಿ otp ಮತ್ತು without OTP emba ಆಯ್ಕೆಯಲ್ಲಿ without OTP ಆಯ್ಕೆ ಮಾಡಿಕೊಂಡು, ನಿಮ್ಮ ಪಡಿತರ ಚೀಟಿಯ ನಂಬರ್ ನಮೂದಿಸಿ ಗೊ ( GO) ಮೇಲೆ ಒತ್ತಿರಿ.

ನಂತರ ನಿಮಗೆ ನಿಮ್ಮ ಪಡಿತರ ಚೀಟಿ, ಹಾಗೂ ಪಡಿತರ ಚೀಟಿಯಲ್ಲಿ ಇರುವ ಸದಸ್ಯರ ವಿವರ, ಅಲ್ಲದೆ ration card ekyc ಆಗಿದೆಯಾ ಎಂದು ಮಾಹಿತಿ ಗೋಚರ ಆಗುತ್ತದೆ.

👉 JOIN WHATSAPP GROUP 👈

RATION CARD RULES : ರೇಷನ್ ಕಾರ್ಡ್ ಹೊಸ ನಿಯಮಗಳು ಇಲ್ಲಿವೆ.

Aadhaar card ration card link ಮಾಡುವ ವಿಧಾನ.