ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಅವಧಿ ವಿಸ್ತರಣೆ. Ration card and aadhar card link

ರಾಜ್ಯದ ಎಲ್ಲಾ ಆತ್ಮೀಯ ಪಡಿತರ ಚೀಟಿ ಗ್ರಾಹಕರಿಗೆ ಕೃಷಿ ಜಗತ್ತು ಜಾಲತಾಣದಿಂದ ನಮಸ್ಕಾರಗಳು ಈ ಲೇಖನದಲ್ಲಿ ಪಡಿತರ ಚೀಟಿಯ Ration card and aadhar card link ಕುರಿತಾದ ಮಹತ್ತರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಎಲ್ಲರಿಗೂ ತಿಳಿದಿರುವ ಹಾಗೆ ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೂ ಸಹ ಪಡಿತರ ಚೀಟಿ ಇದ್ದು, ಇದರ ಸದುಪಯೋಗವನ್ನು ರಾಜ್ಯದ ಎಲ್ಲಾ ಗ್ರಾಹಕರು ( consumers ) ಪಡೆಯುತ್ತಿರುತ್ತಾರೆ. ಪಡಿತರ ಚೀಟಿ ( ration card ) ಇಂದ 10 ಹಲವಾರು ಸರ್ಕಾರಿ ಸೌಲಭ್ಯಗಳು ದೊರಕುತ್ತವೆ.

Aadhaar card ration card link ಮಾಡುವ ವಿಧಾನ.

Ration card and aadhar card link

ಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮುಖಾಂತರ ರಾಜ್ಯದ ಪಡಿತರ ಚೀಟಿಯ ಗ್ರಾಹಕರಲ್ಲಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಜೋಡಣೆ ಮಾಡಲು ಸುತ್ತೋಲೆ ಹೊರಡಿಸಿದ್ದು, ಈಗಾಗಲೇ ಲಕ್ಷಾಂತರ ಪಡಿತರ ಚೀಟಿ ಹೊಂದಿದವರು ಆಧಾರ್ ಕಾರ್ಡ್ ಈಕೆ ವಹಿಸಿ ( aadhar card ekyc ) ಮಾಡಿಸಿರುತ್ತಾರೆ.

ಇಲ್ಲಿಯವರೆಗೆ ಯಾರು ತಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರುವುದಿಲ್ಲ ಅವರಿಗೆ ಮತ್ತೊಮ್ಮೆ ಫೆಬ್ರವರಿ 29ರ ತನಕ ಅವಧಿ ವಿಸ್ತರಣೆ ಮಾಡಿದ್ದು, ಅಷ್ಟರಲ್ಲಿ ತಮ್ಮ ಆಧಾರ್ ಕಾರ್ಡ್ ekyc ಯನ್ನು ಪಡಿತರ ಚೀಟಿಯೊಂದಿಗೆ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪಡಿತರ ಚೀಟಿಯು ತಾತ್ಕಾಲಿಕವಾಗಿ ಬಂದು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Ration card : ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಮತ್ತೆ ಅವಕಾಶ, ಈಗಲೇ ಮಾಡಿಸಿ.

ಕೂಡಲೇ ಎಲ್ಲಾ ಪಡಿತರ ಚೀಟಿಯ ಗ್ರಾಹಕರು ತಮ್ಮ ಪಡಿತರ ಚೀಟಿಯಲ್ಲಿನ ಹೆಸರು ವಿಳಾಸ ಎಲ್ಲವನ್ನು ಆಧಾರ್ ಕಾರ್ಡ್ ನಲ್ಲಿ ಇರುವಂತೆ ನೋಡಿಕೊಂಡು, ekyc ಯನ್ನೂ ಮಾಡಿಸಿಕೊಳ್ಳಬೇಕು. ನೀವು ನಿಮ್ಮ ಹತ್ತಿರದ ಪಡಿತರ ವಿತರಣೆ ಕೇಂದ್ರದಲ್ಲಿ ಕೂಡ ekyc ಮಾಡಿಸಬಹುದು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ರೀತಿಯ ಜೋಡಣೆಯ ಅವಧಿ ವಿಸ್ತರಣೆ ನೀಡಿದ್ದು, ರಾಜ್ಯದ ಇನ್ನೂ ಪಡಿತರ ಚೀಟಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಜೋಡಣೆಯಾಗದ ಗ್ರಾಹಕರಿಗೆ ಇದು ಅನುಕೂಲಕರ ಸಂಗತಿಯಾಗಿದೆ.

ರೇಷನ್ ಕಾರ್ಡ್ ಈಕೆವೈಸಿ ಮಾಡಿಸಿಲ್ಲ ಅಂದ್ರೆ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಬರಲ್ಲ. ಈಗಲೇ ಸ್ಟೇಟಸ್ ಚೆಕ್ ಮಾಡಿ. Ration card ekyc