ಆತ್ಮೀಯ ವೀಕ್ಷಕರೇ ಎಲ್ಲರಿಗೂ ಮತ್ತೊಮ್ಮೆ ಕೃಷಿ ಜಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ಕೇಂದ್ರ ಸರಕಾರದ ಪಾನ್ ಕಾರ್ಡ್ ( pan card linking ) ಕುರಿತಾದ ದೃಢ ನಿರ್ಧಾರದ ಕುರಿತು ಮಾಹಿತಿ ತಿಳಿದುಕೊಳ್ಳೋಣ.
ದೇಶದಲ್ಲಿ ಒಟ್ಟು 75 ಕೋಟಿ ಪಾನ್ ಕಾರ್ಡ್ ಗಳಿದ್ದು ಅದರಲ್ಲಿ ಇಲ್ಲಿಯವರೆಗೆ ಕೇವಲ 57 ಕೋಟಿ ( 57 crores ) ಪಾನ್ ಕಾರ್ಡ್ ಗಳನ್ನು ಆಧಾರ್ ಕಾರ್ಡ್ ( aadhaar card ) ನೊಂದಿಗೆ ಜೋಡಣೆ ( linking ) ಮಾಡಿಸಿಕೊಂಡಿರುತ್ತಾರೆ.
ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ HSRP NUMBER PLATE ಕಡ್ಡಾಯ, ಇನ್ನು 4 ದಿನ ಬಾಕಿ.
Pan card linking with aadhar card
ಕೇಂದ್ರ ಸರ್ಕಾರವು ಪಾನ್ ಕಾರ್ಡಿಗೆ ಆಧಾರ್ ಕಾರ್ಡಿನೊಂದಿಗೆ ಲಿಂಕ್ ಮಾಡಿಸಲು ಅನೇಕ ಬಾರಿ ಅವಕಾಶವನ್ನು ನೀಡಿತ್ತು, 2023ರ ಜೂನ್ 30ನೇ ತಾರೀಕಿನ ಕೊನೆಗೂ ಗಡುವನ್ನು ( deadline) ನೀಡಿ ಆದೇಶವನ್ನು ಹೊರಡಿಸಿತ್ತು.
ಈ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ರೂಲ್ಸ್ ( rules ) ಅನ್ವಯಿಸುವುದು ಕೇವಲ 2017ರ ಮುಂಚೆ ಪಡೆದುಕೊಂಡಿರುವ ಪಾನ್ ಕಾರ್ಡ್ ದಾರರಿಗೆ ಮಾತ್ರ. 2017ರ ನಂತರ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಪಡೆದುಕೊಂಡ ಎಲ್ಲಾ ಫಲಾನುಭವಿಗಳಿಗೆ ( beneficial ) ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ಜೋಡಣೆ ಆಗಿರುತ್ತದೆ.
ಅಕ್ಟೋಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. Anna bhagya amount status
ಈಗ ಕೇಂದ್ರ ಸರ್ಕಾರವು ಕಠಿಣ ಕ್ರಮ ಕೈಗೊಂಡಿದ್ದು ಒಟ್ಟು ದೇಶದಲ್ಲಿ ಸುಮಾರು 11 ಕೋಟಿ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿ ರದ್ದುಗೊಳಿಸಲಾಗಿದೆ. ತಮ್ಮ ಪಾನ್ ಕಾರ್ಡ್ ಗಳು ಸಕ್ರಿಯದಲ್ಲಿ ಇವೆಯಾ ಎಂಬುದನ್ನು ಒಮ್ಮೆ ಖಚಿತ ಪಡಿಸಿಕೊಳ್ಳಿ.
ಪಾನ್ ಕಾರ್ಡ್ ( pan card ) ಎಂಬುದು ಕೇಂದ್ರ ಸರ್ಕಾರದ ಒಂದು ಬಹುಮುಖ್ಯ ಗುರುತಿನ ಡಾಕ್ಯುಮೆಂಟ್ ( document ) ಆಗಿದ್ದು, ಇದನ್ನು ಆದಾಯ ತೆರಿಗೆಯನ್ನು ಕಟ್ಟುವ ಸಮಯದಲ್ಲಿ ಸಹಾಯಕ್ಕಾಗಿ ಈ ಪಾನ್ ಕಾರ್ಡ್ ಉಪಯೋಗವಾಗಲಿದೆ.
126 ಕೋಟಿ ಮಧ್ಯಂತರ ಬೆಳೆ ವಿಮೆ ಖಾತೆಗೆ ಜಮಾ. ಸ್ಟೇಟಸ್ ಚೆಕ್ ಮಾಡಿ. Crop insurance status
ಈಗಾಗಲೇ ನೀವು ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಿದ್ದಲ್ಲಿ ನೀವು ಚಿಂತಿಸುವ ಅಗತ್ಯವಿಲ್ಲ. ಒಂದು ವೇಳೆ ಇನ್ನೂ ಸಹ ಲಿಂಕ್ ಮಾಡಿಸದೆ ಇದ್ದಲ್ಲಿ , ಸಂಬಂಧಪಟ್ಟ ಅಧಿಕಾರಿಗಳನ್ನು ( officials ) ಭೇಟಿ ಮಾಡಿ ಪರಿಶೀಲಿಸಿಕೊಳ್ಳಿ.
ಪಿಎಂ ಕಿಸಾನ್ 15ನೇ ಕಂತಿನ ಹಣ ಜಮಾ ..! Pm kisan 15th installment date..