Aadhaar card ration card link ಮಾಡುವ ವಿಧಾನ.

ಆತ್ಮೀಯ ವೀಕ್ಷಕರೇ ನಿಮಗೆಲ್ಲ ನಮ್ಮ ಕೃಷಿ ಜಗತ್ತು ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ ಇಂದು ಈ ಲೇಖನದಲ್ಲಿ ಅನ್ನ ಭಾಗ್ಯ ಯೋಜನೆ ಹಣ ಪಡೆಯಲು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.

ಈಗಾಗಲೇ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಒಬ್ಬ ವ್ಯಕ್ತಿಗೆ ತಲಾ ಹತ್ತು ಕೆಜಿ ಅಕ್ಕಿ ನೀಡುವ ಘೋಷಣೆಯನ್ನು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ದ ಆಹಾರ ಭದ್ರತಾ ಇಲಾಖೆ ನಿಯಮಾನುಸಾರ ಐದು ಕೆಜಿ ಅಕ್ಕಿ ಮಾತ್ರವೇ ನೀಡಲು ಅನುಮತಿ ನೀಡಲಾಗಿದೆ.

Aadhaar card ration card link ಮಾಡುವ ವಿಧಾನ ಇಲ್ಲಿದೆ.

ಅದರಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಅಕ್ಕಿ ನೀಡಲು ಶಿಫಾರಸು ಮಾಡಿತ್ತು. ದಾಸ್ತಾನುಗಳಲ್ಲಿ ಅಕ್ಕಿ ಕಡಿಮೆ ಇರುವ ಕಾರಣದಿಂದ ಅಥವಾ ಪ್ರಾಕೃತಿಕ ವಿಕೋಪಗಳಿಗೆ ಪೂರೈಸಲು ತೊಂದರೆಯಾಗುವ ಕಾರಣದಿಂದ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿತ್ತು.

ರಾಜ್ಯ ಸರ್ಕಾರದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಕ್ಕಿಯನ್ನು ನೀಡುವ ಬದಲು ಒಬ್ಬ ವ್ಯಕ್ತಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿ ಅಂತೆ ಕೊಟ್ಟು 170 ರೂಪಾಯಿ ನೀಡಲು ನಿರ್ಧರಿಸಿತು.

Aadhaar card ration card link ಮಾಡಿಲ್ಲ ಅಂದ್ರೆ ಹಣ ಬರಲ್ಲ.

ಅದರಂತೆ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಿಗೆ ಪಡಿತರ ಚೀಟಿ ಗೆ ಲಿಂಕ್ ಆಗಿರುವಂತಹ , ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡಿಗೆ ಬ್ಯಾಂಕ್ ಸೀಡಿಂಗ್ ಆಗಿರುವಂತಹ ಖಾತೆಗಳಿಗೆ ಹಣ ಜಮಾ ಆಗಿರುತ್ತದೆ.
ನೀವು ಸಹ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿದೆ ಎಂದು ತಿಳಿದುಕೊಂಡು ಈ ಕೆಳಗೆ ಕೊಟ್ಟಿರುವ ವಿಧಾನದ ಮೂಲಕ ಲಿಂಕ್ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಲು ನೀವು ಮೊದಲು ಆಹಾರ ಸರಬರಾಜು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು.

Aadhaar card link ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.

ಮುಖಪುಟ ತೆಗೆದುಕೊಂಡ ನಂತರ ನೀವು ನಿಮಗೆ ಸೂಕ್ತವಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಕಾಣಿಸುವ ಈ ಸರ್ವಿಸಸ್ ಅಥವಾ ಈ ಸೇವೆಗಳು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಎಡಭಾಗದಲ್ಲಿ ಕಾಣಿಸುವ ಮೂರು ಗೆರೆಗಳ ಮೇಲೆ ಒತ್ತಬೇಕು.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

ಅಲ್ಲಿ ನಿಮಗೆ ಈ ಸ್ಥಿತಿ ಅಥವಾ ಯುಐಡಿ ಲಿಂಕ್ ಅಥವಾ ಹೊಸ ಪಡಿತರ ಚೀಟಿ ಸ್ಥಿತಿ ಎಂದು ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರದಲ್ಲಿ ನಿಮಗೆ ರೇಷನ್ ಕಾರ್ಡ್ ಸ್ಟೇಟಸ್ ಮೊಡ್ಯೂಲ್ ಎಂಬ ಮೂರು ಆಯ್ಕೆಗಳಿರುವ ಪುಟ ತೆಗೆದುಕೊಳ್ಳುತ್ತದೆ.
ಈ ಮೂರು ಆಯ್ಕೆಗಳಲ್ಲಿ ಕೊಟ್ಟಿರುವ ಜಿಲ್ಲೆಗಳ ಮಾಹಿತಿಯೊಂದಿಗೆ ನೀವು ಯಾವ ಜಿಲ್ಲೆಗೆ ಸೇರುತ್ತೀರಿ ಎಂಬುದರ ಮೇಲೆ ಕ್ಲಿಕ್ ಮಾಡಿ ದಾಗ ಮತ್ತೊಂದು ಹೊಸ ಪುಟ ತೆರೆದುಕೊಳ್ಳುತ್ತದೆ.

Seva Sindhu 1 Login ಮಾಡುವ ಸರಳ ವಿಧಾನ.

Ahara.kar.nic.in ಲ್ಲಿ ಲಿಂಕ್ ಮಾಡಬಹುದು.


ಅಲ್ಲಿ ನಿಮಗೆ ಯು ಐ ಡಿ ಲಿಂಕಿಂಗ್ ಫಾರ್ ಆರ್ ಸಿ ಮೆಂಬರ್ಸ್ ಎಂದು ಆಯ್ಕೆ ಕಾಣಿಸುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿದಾಗ ಯು ಐಡಿ ನಂಬರ್ ಲಿಂಕಿಂಗ್ ಫಾರ್ ರೇಷನ್ ಕಾರ್ಡ್ ಮೆಂಬರ್ಸ್ ಎಂದು ಅದರ ಕೆಳಗೆ ಆಧಾರ್ ಕಾರ್ಡ್ ನಂಬರ್ ಪಕ್ಕದಲ್ಲಿ ವರ್ಚುಯಲ್ ಐಡಿ ಎಂಬ ಆಯ್ಕೆಗಳು ಇರುತ್ತವೆ.

https://ahara.kar.nic.in/status2/

Ration card link
Uid linking for ration card members

ಈಗ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿ ಕೆಳಗಡೆ ಕಾಣಿಸುವ ಗೋ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ, ನಿಮ್ಮ ಆಧಾರ್ ಕಾರ್ಡಿಗೆ ಲಿಂಗ ಆಗಿರುವಂತಹ ಮೊಬೈಲ್ ನಂಬರ್ ಗೆ ಒನ್ ಟೈಮ್ ಪಾಸ್ವರ್ಡ್ ಅಥವಾ ಓಟಿಪಿ ಆರು ಸಂಖ್ಯೆಯನ್ನು ನಂಬರ್ ಬರುತ್ತದೆ.

ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವ ಸಂದೇಶ ಬರುತ್ತದೆ.

ಓಟಿಪಿ ನಂಬರ್ ಅನ್ನು ಕೆಳಗೆ ಕೊಟ್ಟಿರುವ ಎಂಟರ್ ಓಟಿಪಿ ಖಾನೆಯಲ್ಲಿ ಭರ್ತಿ ಮಾಡಿ ಕೆಳಗಡೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಭರ್ತಿ ಮಾಡಿ ಕೊನೆಯದಾಗಿ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ನೋಂದಾಯಿಸಿಕೊಂಡ ಮೊಬೈಲ್ ಸಂಖ್ಯೆಗೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಸಂದೇಶ ಬರುತ್ತದೆ.

Pm kisan 14th installment release date

Anna bhagya dbt status check ವಿಧಾನ.