Krishi mela 2023 | ಧಾರವಾಡದಲ್ಲಿ ಸೆಪ್ಟೆಂಬರ್ 9 ರಿಂದ ಕೃಷಿ ಮೇಳ 2023

ಆತ್ಮೀಯ ಕೃಷಿ ರೈತ ಬಾಂಧವರಿಗೆ ಮತ್ತೊಮ್ಮೆ ನಮ್ಮ ಈ ಕೃಷಿ ಜಾಲತಾಣಕ್ಕೆ ಸ್ವಾಗತ. ಈ ಲೇಖನದಲ್ಲಿ 2023ರ ಕೃಷಿ ಮೇಳ ಎಲ್ಲಿ ನಡೆಯಲಿದೆ ಮತ್ತು ದಿನಾಂಕ ಸ್ಥಳ ಯಾವುದು ಹೇಗೆ ಎಂದು ಮಾಹಿತಿಯನ್ನು ತಿಳಿದುಕೊಳ್ಳೋಣ. ( krishi mela 2023 )

ಹೌದು ರೈತ ಬಾಂಧವರೇ 2022 23 ನೇ ಸಾಲಿನ ಕೃಷಿ ಮೇಳವು ರಾಜ್ಯದ ನಾನಾ ಕಡೆ ಅಂದರೆ ಧಾರವಾಡ ಬೆಂಗಳೂರು ಇಲ್ಲಿ ಅತ್ಯಂತ ಸುಸ್ಥಿರವಾಗಿ ನಡೆದಿದ್ದವು. ಈ ಕೃಷಿ ಮೇಳಗಳಲ್ಲಿ ಪಶು ಸಂಗೋಪನೆ ಸಿರಿ ಧಾನ್ಯಗಳು, ಹೀಗೆ ಅನೇಕ ಕೃಷಿ ಸಂಬಂಧಿತ ಹಲವಾರು ವಿಷಯಗಳು ರೈತರಿಗೆ ದೊರಕುವಲ್ಲಿ ಕೃಷಿ ಮೇಳಗಳ ಪಾತ್ರ ಹೆಚ್ಚಿತ್ತು.

ಕೃಷಿ ಮೇಳ 2023 ( krishi mela 2023 ) ಸೆಪ್ಟೆಂಬರ್ 9 ರಿಂದ.

ಅದೇ ರೀತಿ ಈ ವರ್ಷ ಸಹ ಧಾರವಾಡ ದಲ್ಲಿ ಕೃಷಿ ಮೇಳ ಆಯೋಜಿಸಲಾಗಿದ್ದು, ಸಪ್ಟಂಬರ್ ತಿಂಗಳ 9ನೇ ತಾರೀಖಿನಿಂದ 12ನೇ ತಾರೀಖಿನವರೆಗೆ, ಅತ್ಯಂತ ಸುಸಜ್ಜಿತವಾಗಿ ಕೃಷಿ ಮೇಳ ಜರಗಲಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ಪ್ರಾಧ್ಯಾಪಕರು ಮತ್ತು ಕೃಷಿ ಮೇಳದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಸ್ ಎನ್ ಜಾದವ್ ಅವರು ಇತ್ತೀಚೆಗೆ ಪ್ರಕಟಣೆಯಲ್ಲಿ 2023ರ ಸಿರಿಧಾನ್ಯ ಶೀರ್ಷಿಕೆ ಅಡಿಯಲ್ಲಿ ಘೋಷಣೆಯನ್ನು ಮಾಡಿದ್ದಾರೆ.

ಕೃಷಿ ಮೇಳದಲ್ಲಿ ಏನೆಲ್ಲಾ ಇರುತ್ತೆ?

ಈ ಕೃಷಿ ಮೇಳದಲ್ಲಿ ಮುಖ್ಯವಾಗಿ ಸಿರಿಧಾನ್ಯಗಳ ಉತ್ಪಾದನೆ ಅವುಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ, ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿಗಳು ಹಿಂಗಾರು ಬೆಳೆಯ ತಾಂತ್ರಿಕತೆಗಳು, ಬರ ನಿರ್ವಹಣಾ ತಾಂತ್ರಿಕತೆ, ಒಣ ಬೇಸಾಯ, ಜಲಾನಯನ ಅಭಿವೃದ್ಧಿ ಮಣ್ಣು ಜಲ ಸಾಕ್ಷರತೆ ಜಲ ಸಂರಕ್ಷಣೆ ತಾಂತ್ರಿಕತೆಗಳು, ಕೃಷಿ ಹಾಗೂ ತೋಟಗಾರಿಕಾ, ರಫ್ತು ಅವಕಾಶಗಳನ್ನು ಉತ್ತೇಜಿಸುವ ಪ್ರದರ್ಶನಗಳು, ಮತ್ತು ಕಿಸಾನ್ ಡ್ರೋನ್ ಬಳಕೆ , ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಈ ಕೃಷಿ ಮೇಳದಲ್ಲಿ ಆಯೋಜಿಸಲಾಗಿದೆ.

ಅದಲ್ಲದೆ ಕೃಷಿ ಮೇಳ 2023 ದ ಪರವಾಗಿ ಪರಿಸರ ಸಂರಕ್ಷಣೆ ಕೃಷಿ ಯಂತ್ರೋಪಕರಣಗಳು ಕೃಷಿ ಅರಣ್ಯ ಪದ್ಧತಿಗಳು ಮತ್ತು ತರಕಾರಿ ಬೆಳೆಗಳ ಪ್ರದರ್ಶನಗಳು ಕೀಟ ಪ್ರಪಂಚ ಕೃಷಿ ಸಮಾಲೋಚನೆ ಸಲಹೆ, ವಿವಿಧ ಜಾನುವಾರುಗಳ ಪ್ರದರ್ಶನಗಳು ವಸ್ತ್ರ ವಿನ್ಯಾಸ ಮತ್ತು ಸಂಘ-ಸಂಸ್ಥೆಗಳಿಂದ ಉತ್ಪನ್ನಗಳ ಮಾರಾಟ ಮಾಹಿತಿಗಳು ಇನ್ನೂ ಹಲವಾರು ಉತ್ತಮ ಕಾರ್ಯಕ್ರಮ ಸಂಘಟನೆ ಮಾಡಲಾಗುತ್ತಿದೆ.

ಸುಮಾರು 15 ಲಕ್ಷ ರೈತರು ಭಾಗವಹಿಸುವ ಸಾಧ್ಯತೆ.

ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದಿಂದ ಸುಮಾರು 15 ಲಕ್ಷಕ್ಕಿಂತಲೂ ಹೆಚ್ಚು ಕೃಷಿ ರೈತರು ಮತ್ತು ಮಹಿಳೆಯರು ಭಾಗವಹಿಸುವ ಅಂದಾಜು ಮಾಡಲಾಗಿದ್ದು, ನೀವು ಸಹ ಕೃಷಿ ಬಗ್ಗೆ ಕೃಷಿ ಸಲಕರಣೆಗಳ ಬಗ್ಗೆ ಇನ್ನೂ ಅನೇಕ ವಿಷಯಗಳ ಮಾಹಿತಿಗಳನ್ನು ಅರಿತುಕೊಳ್ಳಲು ಸಪ್ಟೆಂಬರ್ 9 ಮತ್ತು 12ನೇ ತಾರೀಕು ಜರುಗುವ ಕೃಷಿ ಮೇಳದಲ್ಲಿ ಪಾಲ್ಗೊಳ್ಳಿರಿ.

ಕೃಷಿ ಮೇಳದಲ್ಲಿ ನೀವು ಕಾಂಪ್ಲೆಕ್ಸ್ ಗಳನ್ನು ಅಂಗಡಿಗಳನ್ನು ಹಾಕಲು ಈ ಕೆಳಗೆ ಕೊಟ್ಟಿರುವ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕ ಮಾಡಿ. 08362214468, 8277478507
ಈ ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಕೃಷಿ ರೈತ ಬಾಂಧವರಿಗೆ ಮತ್ತು ಬಂದು ಮಿತ್ರರಿಗೆ ಕೂಡಲೇ ವಾಟ್ಸಾಪ್ ಮೂಲಕ ಶೇರ್ ಮಾಡಿ.

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.

Gruha lakshmi application : ಸಲ್ಲಿಸಲು ಈ ಸಂಖ್ಯೆಗೆ ಸಂದೇಶ ಕಳಿಸಿ.

ಮೊಬೈಲ್ ನಲ್ಲಿ ಸುಲಭವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ.