ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಇನ್ಮುಂದೆ what’s app ನಲ್ಲಿ, ಎಲ್ಲೂ ಹೋಗುವ ಅವಶ್ಯಕತೆ ಇಲ್ಲಾ

ರೈತ ಬಾಂಧವರೇ ನಿಮಗೆಲ್ಲ ಮತ್ತೆ ನಮ್ಮ ಈ ಕೃಷಿ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.

2023 ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಘೋಷಣೆ ಮಾಡಿದ್ದಂತಹ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಒಂದು, ಸಿದ್ದರಾಮಯ್ಯ ಅವರು ಯೋಜನೆಗೆ ಅನುಷ್ಠಾನಗೊಳಿಸಿ ಜುಲೈ 10 ರಿಂದ ಅರ್ಜಿ ಸಲ್ಲಿಕೆಯನ್ನು ಪ್ರಾರಂಭ ಮಾಡಿದ್ದರು.

ಎಲ್ಲಾ ರಾಜ್ಯದ ಅರ್ಹ ಕುಟುಂಬದ ಫಲಾನುಭವಿಗಳು ಅರ್ಜಿ ಸಲ್ಲಿಸಲು, ರಾಜ್ಯ ಸರ್ಕಾರವು ನಿಗದಿಗೊಳಿಸಿದ ಮತ್ತು ಸೂಚಿಸಿದ ಕೆಲವು ಸರ್ಕಾರದ ಕಚೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

ಅದರಲ್ಲಿ ಗ್ರಾಮವನ್ನು ಕಚೇರಿ ಗ್ರಾಮ ಪಂಚಾಯಿತಿ ಕಚೇರಿ ಮತ್ತು ಕರ್ನಾಟಕ ಒಂದು ಕಚೇರಿಗಳಲ್ಲಿ ಈಗಾಗಲೇ ಅರ್ಜಿಗಳನ್ನು ಅರ್ಹ ಫಲಾನುಭವಿಗಳಿಂದ ಸ್ವೀಕರಿಸುತ್ತಲಿದ್ದು, ಅರ್ಜಿಯನ್ನು ಸಲ್ಲಿಸಲು ಯಾವುದೇ ಶುಲ್ಕವನ್ನು ಭರಿಸುವಂತಿಲ್ಲ.

ಕೆಲವು ತಾಂತ್ರಿಕ ದೋಷಗಳಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಸರ್ವರ ಸಮಸ್ಯೆಯಿಂದ ವಿಳಂಬವಾಗುತ್ತಲಿದ್ದು, ಈ ಕಾರಣದಿಂದಾಗಿ ರಾಜ್ಯ ಸರ್ಕಾರವು ಮತ್ತೊಂದು ಉತ್ತಮ ಉಪಾಯವನ್ನು ಕಂಡುಕೊಂಡಿದೆ.

ರಾಜ್ಯ ಸರ್ಕಾರ ನಿಗದಿಪಡಿಸಿದ ಸಂಖ್ಯೆಯಾದ 8147500500 ಈ ಸಂಖ್ಯೆಗೆ ನೀವು ವಾಟ್ಸಪ್ ಮೂಲಕ ನಿಮ್ಮ ರೇಷನ್ ಕಾರ್ಡ್ ನಂಬರ್ ಅಥವಾ ನಿಮ್ಮ ಎಲ್ಲಾ ದಾಖಲೆಗಳನ್ನು, ವಾಟ್ಸಪ್ ಸಂದೇಶದ ಮೂಲಕ ರವಾನಿಸಿದ್ದಲ್ಲಿ, ಎಲ್ಲಾ ದಾಖಲೆಗಳು ಸಂಬಂಧಪಟ್ಟ ಗ್ರಾಮ one ಕಚೇರಿಗಳು, ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಸಂದೇಶ ರವಾನೆ ಆಗುತ್ತದೆ.

ನಂತರ ನೀವು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಲ್ಲಿಂದ ಶುರುವಾಗುತ್ತದೆ, ಈ ರೀತಿಯಾಗಿ ಸರ್ಕಾರವು ಒಂದು ಉತ್ತಮ ಉಪಾಯವನ್ನು ಕಂಡುಕೊಂಡಿದ್ದು, ಮಹಿಳೆಯರಿಗೆ ಅತ್ಯಂತ ಸುಲಭದ ರೀತಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅನುವು ಮಾಡಿಕೊಟ್ಟಿದೆ.

ಮಾನ್ಯ ಸಿದ್ದರಾಮಯ್ಯ ಅವರು ಇದೇ ತಿಂಗಳ ಆಗಸ್ಟ್ 15ನೇ ತಾರೀಕಿನಂದು ಸ್ವಾತಂತ್ರ ದಿನಾಚರಣೆ ಅಂಗವಾಗಿ ಎಲ್ಲಾ ಕುಟುಂಬಗಳ ಗೃಹ ಲಕ್ಷ್ಮಿ ಯೋಜನೆ ಯ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಬಂಧು ಮಿತ್ರರಿಗೆ ಮತ್ತು ಕೃಷಿ ಬಾಂಧವರಿಗೆ ಈ ಲೇಖನವನ್ನು ಶೇರ್ ಮಾಡುವುದರ ಮೂಲಕ, ನಮ್ಮ ಈ ಜಾಲತಾಣಕ್ಕೆ ಸಹಕರಿಸಿ. ಮತ್ತು ಸ್ಕ್ರೀನ್ ಮೇಲೆ ಕಾಣುವ ವಾಟ್ಸಪ್ ಗ್ರೂಪ್ ನ ಮೇಲೆ ಕ್ಲಿಕ್ ಮಾಡಿ ನಮ್ಮ ಗ್ರೂಪಿಗೆ ಜಾಯಿನ್ ಆಗಬಹುದು.

Gruha jyothi application : ಒಂದೇ ದಿನಕ್ಕೆ 10 ಲಕ್ಷ ಅರ್ಜಿ ಸಲ್ಲಿಕೆ.

ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿ ಪಟ್ಟಿ ಬಿಡುಗಡೆ. Pm kisan beneficiary status

Leave a Comment

error: Content is protected !!