Gruha lakshmi scheme ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್.

ರಾಜ್ಯದ ಎಲ್ಲಾ ರೈತ ಬಾಂಧವರಿಗೆ ನಮ್ಮ ಈ ಕೃಷಿ ಸಂಬಂಧಿತ ವೆಬ್ಸೈಟ್ ಗೆ ಸ್ವಾಗತ ಇಂದು ನಾವು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಒಂದಾದ ಗೃಹಲಕ್ಷ್ಮಿ ಯೋಜನೆ, ( gruha lakshmi scheme ) ಕುರಿತು ಮಾಹಿತಿ ತಿಳಿದುಕೊಳ್ಳೋಣ.

2023ರ ಪ್ರಸಕ್ತ ಸಾಲಿನಲ್ಲಿ ಘೋಷಣೆಗೊಂಡ ಕಾಂಗ್ರೆಸ್ ಸರ್ಕಾರದ ಪಂಚಾಯತ್ ಗ್ಯಾರಂಟಿ ಯೋಜನೆಗಳಲ್ಲಿ, ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

Gruha lakshmi scheme ಅರ್ಜಿ ಸಲ್ಲಿಕೆ ಆರಂಭ.

ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡಲು ನೂತನವಾಗಿ ವಿಧಾನಸಭಾ ಚುನಾವಣೆ ಗೆದ್ದ, ಕಾಂಗ್ರೆಸ್ ಸರ್ಕಾರವು, ರಾಜ್ಯದ ಎಲ್ಲಾ ಕುಟುಂಬದ ಒಬ್ಬ ಮಹಿಳೆಗೆ ಮಾಸಿಕ 2,000 ಗಳನ್ನು ನೀಡಲು ನಿರ್ಧರಿಸಿತ್ತು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕುಟುಂಬದ ಮನೆ ಯಜಮಾನ ತಾವೇ ಘೋಷಣೆ ಮಾಡಿಕೊಂಡು ಅವರ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಫೋನ್ ನಂಬರ್ ಹೊಂದಿರಬೇಕು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬೇಕು ಎಂಬುದನ್ನು ಈಗ ತಿಳಿಯೋಣ.

ನಂತರ ಕುಟುಂಬದ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಚುನಾವಣಾ ಚೀಟಿ ಅಥವಾ ವೋಟರ್ ಐಡಿ ಕಾರ್ಡ್ ನಂಬರ್ ತೆಗೆದುಕೊಂಡು ಇನ್ನೂ ಹಲವಾರು ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಲು ಸಿದ್ಧರಿರಬೇಕು.

ಸರ್ಕಾರದ ವೆಬ್ಸೈಟ್ ಆದಂತಹ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಮೊದಲು ಜೂನ್ 16ಕ್ಕೆ ಅರ್ಜಿ ಸಲ್ಲಿಸಲು ಫಾರಂ ಅನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದರು.

Gruha lakshmi scheme ಅರ್ಜಿ ಸಲ್ಲಿಕೆಯಲ್ಲಿ ಒಟ್ಟು 12 ವಿಭಾಗಗಳು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿ ನಮೂನೆಯಲ್ಲಿ ಒಟ್ಟು 11 ವಿಭಾಗಗಳು ಇದ್ದು, ಪ್ರತಿ ವಿಭಾಗದಲ್ಲಿ ವಿವಿಧ ರೀತಿಯ ಅಂಕಿ ಅಂಶಗಳ ಜೊತೆಗೆ ಮಾಹಿತಿಗಳನ್ನು ಸರ್ಕಾರದ ಆದೇಶದಂತೆ ನೀಡಿರುವಂತಹ ಸೂಕ್ತವಾದ ದಾಖಲೆಗಳೊಂದಿಗೆ ದಾಖಲಿಸಬೇಕು.

ಉದಾಹರಣೆಗೆ ವಿಭಾಗ ಒಂದು ಎಬಿ ಸೆಕ್ಷನ್ ನಲ್ಲಿ ಮಹಿಳೆಯ ಅಥವಾ ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಯುಐಡಿ ನಂಬರ್ ನಮೂದಿಸಬೇಕು. ಮತ್ತು ತಮ್ಮ ವೋಟರ್ ಐಡಿ ಹಾಗೂ ರೇಷನ್ ಕಾರ್ಡ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಬೇಕು.

ಅರ್ಜಿದಾರಳು ಸ್ವಯಂ ಘೋಷಣೆ ಮಾಡಬೇಕು.

ಅರ್ಜಿ ನಮೂನೆಯ ಕೊನೆಯ ಭಾಗದಲ್ಲಿ ಅರ್ಜಿದಾರಳು ಸ್ವಯಂಘೋಷಣೆ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ಇದರಲ್ಲಿ ಅರ್ಜಿಯನ್ನು ಸಲ್ಲಿಸುವ ಮಹಿಳೆಯು ತನ್ನ ಪತಿಯ ಇನ್ಕಮ್ ಟ್ಯಾಕ್ಸ್ ಅಥವಾ ಆದಾಯ ತೆರಿಗೆ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಈ ರೀತಿಯ ಯಾವುದೇ ತೆರಿಗೆಯನ್ನು ಪಾವತಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಮಾಡಬೇಕು.

ಅರ್ಜಿಯ ಕೊನೆಗೆ ಅರ್ಜಿದಾರಳ ಸಹಿ ಮತ್ತು ತಮ್ಮ ಎಡಗಡೆ ಹೆಬ್ಬಟ್ಟಿನ ಗುರುತು ಹಾಕಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

Gruha lakshmi yojana ಸಂಪೂರ್ಣ ಅರ್ಜಿ ಸಲ್ಲಿಸುವ ವಿಧಾನ ಶೀಘ್ರದಲ್ಲಿ.

ಮುಂದಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಯ ಎಲ್ಲಾ ಮಾಹಿತಿಗಳೊಂದಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ವಿವರವಾಗಿ ತಿಳಿಸುತ್ತೇವೆ. ನಮಸ್ಕಾರ

Leave a Comment

error: Content is protected !!