ಗೃಹ ಲಕ್ಷ್ಮಿ ಒಂದನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ. Gruha lakshmi installment

2023 ಪ್ರಸಕ್ತ ಸಾಲಿನ ಗೃಹ ಲಕ್ಷ್ಮಿ ಯೋಜನೆಯ ( gruha lakshmi installment ) ಒಂದನೇ ಕಂತಿನ 2000 ರೂಪಾಯಿ ಹಣ ಕೊನೆಗೂ ಯಶಸ್ವಿಯಾಗಿ ಖಾತೆಗೆ ಜಮಾ ಆಗಿದೆ.

Gruha lakshmi installment
Gruha lakhsmi 1st installment deposited

ಹೌದು ಗೃಹ ಲಕ್ಷ್ಮಿ ಫಲಾನುಭಿಗಳೇ ನನ್ನ ಪಡಿತರ ಚೀಟಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಜಮಾ ಆಗಿದ್ದು, ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ 2000 ಹಣ ಜಮಾ ಆಗಿರುವ ಸಂದೇಶ ಬಂದಿದೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಹಣ ಜಮಾ ಆಗಲು ಈ ಕೆಲಸ ಮಾಡಿ

Gruha lakhsmi installment ಜಮಾ

ಆಗಸ್ಟ್ ತಿಂಗಳು ಕಳೆದು ಈಗ ಸೆಪ್ಟೆಂಬರ್ 15 ತಾರೀಕು ಕಳೆದರೂ ಸಹ ಇನ್ನೂ ಲಕ್ಷಾಂತರ ಮಹಿಳೆಯರ ಖಾತೆಗೆ ಒಂದನೇ ಕಂತಿನ ಹಣ ಜಮಾ ಆಗಿಲ್ಲ. ಈ ರೀತಿ ಆದಲ್ಲಿ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಆರ್ಥಿಕ ಮತ್ತು ಮಾನಸಿಕ ಹಿಂಸೆ ಆಗುವುದಂತು ಕಂಡಿತಾ.

ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸುವ ಪ್ರಕ್ರಿಯೆ ತಾತ್ಕಾಲಿಕ ತಡೆ ಹೇರಿದ್ದು, ಆಧಾರ್ ಕಾರ್ಡ್ ( Aadhaar card ) ಮತ್ತು ಪಡಿತರ ಚೀಟಿ ( ration card ) ತಿದ್ದುಪಡಿ ಮಾಡಿಕೊಂಡು , ಅರ್ಜಿ ಸಲ್ಲಿಸಲು ಅವಕಾಶ ಇಲ್ಲದಂತಾಗಿದೆ.

ಇನ್ನೂ ಸಾವಿರಾರು ಮಹಿಳೆಯರು ಗೃಹ ಲಕ್ಷ್ಮಿ ಯೋಜನೆ ಗೆ ಅರ್ಜಿ ಸಲ್ಲಿಸಿಲ್ಲ. ಕಾರಣ ಮನೆಯ ಯಜಮಾನಿ ಬದಲಾವಣೆ, ಕುಟುಂಬ ಸದಸ್ಯರ ಜೋಡಣೆ, ಅಲ್ಲದೆ ಹೆಸರು ತಿದ್ದುಪಡಿ ( amendment ) ಇರುವುದರಿಂದ , ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದೆ.

ಎಲ್ಲಾ ಅರ್ಜಿ ಸಲ್ಲಿಕೆ ಸಕ್ರಿಯವಾಗಿ , ಮತ್ತು ಯಶಸ್ವಿಯಾಗಿ ಸಲ್ಲಿಸಿ ಗೃಹ ಲಕ್ಷ್ಮಿ ಫಲಾನುಭವಿ ನೋಂದಣಿ ಸಂಖ್ಯೆ ( gruha Lakshmi register number ) ಪಡೆದರೂ ಸಹ ಹಣ ಜಮಾ ಆಗದೆ ಇರುವುದು, ಆತಂಕ ಮತ್ತು ಫಲಾನುಭವಿಗಳ ಸಿಟ್ಟಿಗೆ ಕಾರಣವಾಗಿದೆ.

ನಿಮ್ಮ ಖಾತೆಗಳಿಗೆ ಇನ್ನೂ ಹಣ ಜಮಾ ಆಗುವ ಕಾರ್ಯ ಸಕ್ರಿಯದಲ್ಲಿದ್ದು, ನೀವು ಇನ್ನೂ ಕೆಲವು ದಿನಗಳು ಕಾಯುವ ಅನಿವಾರ್ಯತೆ ಇದೆ. ಯಾವುದೇ ಗೊಂದಲಕ್ಕೆ ಒಳಗಾಗದೆ ನಿಮ್ಮ ಬ್ಯಾಂಕ್ ಖಾತೆ, ಮತ್ತು ಮೊಬೈಲ್ ನಂಬರ್ ಸರಿಯಾಗಿ ಜೋಡಣೆ ಆಗಿದೆಯಾ ಎಂದು ನೋಡಿ.

ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status

ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಮುಂದಿನ ದಿನಗಳಲ್ಲಿ ನೀಡುವ ಸುತ್ತೊಲೆಗಳ, ಆದೇಶಗಳ ಬಗ್ಗೆ ತುರ್ತಾಗಿ ನಿಮಗೆಲ್ಲ ಮಾಹಿತಿಯನ್ನು ಲೇಖನದ ಮೂಲಕ ನಿಮಗೆ ತಲುಪಿಸಲು ನಾವು ಶ್ರಮಿಸುತ್ತೇವೆ. ಧನ್ಯವಾದ.

ನಿಮಗೆ ಈ ಮಾಹಿತಿ ಉಪಯುಕ್ತ ಎನಿಸಿದಲ್ಲಿ ನಿಮ್ಮ ಬಂದು ಮಿತ್ರರಿಗೆ ಮತ್ತು ಕುಟುಂಬದವರಿಗೆ ವಾಟ್ಸಾಪ್ ಮತ್ತು facebook ಮೂಲಕ share ಮಾಡಿರಿ.

ತಡಪಾಲ್ ಪಡೆಯಲು ಅರ್ಜಿ ಆಹ್ವಾನ, ಶೇ 50% ರಷ್ಟು ಸಬ್ಸಿಡಿ. Tadpal subsidy

ಗೃಹ ಲಕ್ಷ್ಮಿ 2000ರೂ ಹಣ ಖಾತೆಗೆ ಜಮಾ. ನಿಮಗೆ ಹಣ ಬಂತಾ? ಇಲ್ಲಿದೆ ಮಾಹಿತಿ. Gruha lakshmi amount check

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.