ಆತ್ಮೀಯ ವೀಕ್ಷಕರೇ ನಿಮಗೆಲ್ಲ ನಮಸ್ಕಾರ ಈ ಲೇಖನದಲ್ಲಿ ನಾವು ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಒಂದನೇ ಕಂತು ಹಣ ಜಮಾ ಆಗುವ ಟಿಬಿಟಿ ಸ್ಟೇಟಸ್ ಚೆಕ್( gruha lakshmi dbt status ) ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.
ಅಗಸ್ಟ್ 30ನೇ ತಾರೀಕು ಮೈಸೂರಿನಲ್ಲಿ ದೊಡ್ಡದಾಗಿ ಸಮಾರಂಭ ನಡೆಸಿ, ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಒಂದನೇ ಕಂತಿನ ಹಣವನ್ನು ಜಮಾ ಮಾಡಲಾಗುವುದು ಎಂದು ಹೇಳಿದ್ದರು.
Gruha Lakshmi dbt status ಚೆಕ್ ಮಾಡುವ ವಿಧಾನ.
ಆದರೆ ಇಂದು ಸಪ್ಟಂಬರ್ 6 ದಿನ ಕಳೆದರೂ ಇನ್ನೂ ಸಹ ರಾಜ್ಯದ ಮಹಿಳೆಯರ ಖಾತೆಗೆ ಒಂದನೇ ಕಂತಿನ ಹಣ ಜಮಾ ಆಗಿರುವುದಿಲ್ಲ. ಇದರಿಂದ ಲಕ್ಷಾಂತರ ಮಹಿಳೆಯರು ಬೇಸರಕ್ಕೆ ಈಡು ಆಗಿದ್ದು, ಹಣ ಖಾತೆಗೆ ಜಮಾ ಆಗುತ್ತದೆಯೋ ಇಲ್ಲವೋ ಎಂದು ಆತಂಕದಲ್ಲಿ ಮತ್ತು ಸಂದೇಹ ದಲ್ಲಿದ್ದಾರೆ.
ಆದರೆ ಕೆಲವು ಜನರಿಗೆ ಗೃಹಲಕ್ಷ್ಮಿ ಒಂದನೇ ಕಂತಿನ 2000 ಹಣ ಜಮಾ ಆಗಿದ್ದು, ಅವರುಗಳು ಇನ್ನಿತರರಿಗೆ ಜಮಾ ಆಗಿರುವ ಕುರಿತು ಮಾಹಿತಿ ಹಂಚುತ್ತಿರುವುದರಿಂದ, ಜಮಾ ಆಗದೇ ಇರುವ ಫಲಾನುಭವಿಗಳಿಗೆ ಬೇಸರ ಉಂಟಾಗಿದೆ.
ಗೃಹ ಲಕ್ಷ್ಮಿ ಹಣ ಜಮಾ ಆಗಿರುವ ಸ್ಟೇಟಸ್ ಮೊಬೈಲ್ನಲ್ಲಿ ಚೆಕ್ ಮಾಡಿ.
ಈಗ ಸರ್ಕಾರವು ಗೃಹಲಕ್ಷ್ಮಿ ಹಣ ಚೆಕ್ ಮಾಡುವ ಅಥವಾ ಸ್ಟೇಟಸ್ ಚೆಕ್ ಮಾಡುವ ಲಿಂಕನ್ನು ಬಿಡುಗಡೆ ಮಾಡಿದ್ದು ಈ ಲಿಂಕನ್ನು ಸಹಾಯದಿಂದ ನಿಮ್ಮ ಗೃಹಲಕ್ಷ್ಮಿ ಹಣ ಜಮಾ ಆಗಿದೆಯಾ ಇಲ್ಲವಾ ಮತ್ತೆ ಏನು ಕಾರಣ ಎಂಬದನ್ನು ಈ ಲಿಂಕನ ಸಹಾಯದಿಂದ ನೀವು ತಿಳಿಯಬಹುದಾಗಿದೆ.
ಈ ಕೆಳಗೆ ಕೊಟ್ಟಿರುವ ಲಿಂಕನ ಸಹಾಯದಿಂದ ನೀವು, ಗೃಹ ಲಕ್ಷ್ಮಿ ಯೋಜನೆಯ ಡಿಬಿಟಿ ಸ್ಟೇಟಸ್( gruha Lakshmi dbt status ) ಅನ್ನು ತಿಳಿದುಕೊಳ್ಳಬಹುದಾಗಿದೆ.
1) ಇಲ್ಲಿ ಕೊಟ್ಟಿರುವ ನೀಲಿ ಬಣ್ಣದ ಲಿಂಕನ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮಗೆ ಮಹಾಲಕ್ಷ್ಮಿ ಯೋಜನೆಯ ಡಿಬೀಟಿ ಸ್ಟೇಟಸ್ ಚೆಕ್ ಮಾಡುವ ಪುಟ ತೆಗೆದುಕೊಳ್ಳುತ್ತದೆ.
2) ನಂತರ ನಿಮಗೆ ಅಲ್ಲಿ ಅಪ್ಲಿಕೇಶನ್ ಟ್ರ್ಯಾಕರ್ ( application tracker ) ಎಂಬ ಆಯ್ಕೆ ದೊರೆಯುತ್ತದೆ, ಆಗ ನೀವು ಅಪ್ಲಿಕೇಶನ್ tracker ಮೇಲೆ ಒತ್ತಬೇಕು.
Whatspp ಗ್ರೂಪ್👉 join link 👈ಆಗಿ
3) ಅದಾದ ಮೇಲೆ ನಿಮ್ಮ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ನಮೂದು ಮಾಡುವ ಒಂದು ಬಿಳಿ ಬಣ್ಣದ ಖಾನೆ ಇರುತ್ತದೆ. ಅದರಲ್ಲಿ ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.
4) ಕ್ಲಿಕ್ ಮಾಡಿದ ನಂತರ ನಿಮ್ಮ ಮುಂದೆ ಹಲವಾರು ಮಾಹಿತಿಗಳು ಉಳ್ಳ ಪುಟ ತೆಗೆದುಕೊಂಡು, ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅಪ್ಲಿಕೇಶನ್ ನಂಬರ್ ಪೇಮೆಂಟ್ ಮಾಡಿರುವ ದಿನಾಂಕ ಮತ್ತು ಪೇಮೆಂಟ್ ಸ್ಟೇಟಸ್ ಕಾಣಿಸುತ್ತದೆ. ಅಲ್ಲಿ ಪೇಮೆಂಟ್ ಸಕ್ಸಸ್ ಎಂದು ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂದು ಅರ್ಥ.
Gruha lakshmi dbt status link– https://sevasindhu.karnataka.gov.in/Gruha_lakshmi_DBT/Tracker_Eng
https://sevasindhugs1.karnataka.gov.in/gl-stat-sp/Slot_Track
ಸೂಚನೆ: ನೀವು ಗೃಹಲಕ್ಷ್ಮಿ ಯೋಜನೆಯ ಪೇಮೆಂಟ್ ಸ್ಟೇಟಸ್ ನೋಡಲು ಕ್ಲಿಕ್ ಮಾಡಿದ ಲಿಂಕ್ ತೆರೆದುಕೊಳ್ಳದೆ ಇದ್ದಲ್ಲಿ, ಸಮಸ್ಯೆಯಿಂದ ಓಪನ್ ಆಗುವುದಿಲ್ಲ ಇದಕ್ಕೆ ಕಾರಣ ರಾಜ್ಯಾದ್ಯಂತ ಈ ಒಂದು ಲಿಂಕನ್ನು ಕ್ಲಿಕ್ ಮಾಡುವ ಕಾರಣದಿಂದಾಗಿ ಲೋಡ್ ಆಗಿರುತ್ತದೆ. ಅದಕ್ಕೆ ನೀವು ಕೆಲವು ಸಮಯದ ನಂತರ ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಿ.
ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಕೂಡಲೇ ನಿಮ್ಮ ಬಂಧು ಮಿತ್ರರಿಗೆ, ನಿಮ್ಮ ವಾಟ್ಸಪ್ ಮೂಲಕ ಈ ಸಂದೇಶವನ್ನು ಲೇಖನವನ್ನು ತಲುಪಿಸಿ. ಎಲ್ಲರೂ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ತಿಳಿದುಕೊಳ್ಳಿ.
ಗೃಹ ಲಕ್ಷ್ಮಿ 2000ರೂ ಹಣ ಖಾತೆಗೆ ಜಮಾ. ನಿಮಗೆ ಹಣ ಬಂತಾ? ಇಲ್ಲಿದೆ ಮಾಹಿತಿ. Gruha lakshmi amount check
ಗೃಹ ಲಕ್ಷ್ಮಿ 1ಕಂತಿನ ಹಣ ಈ ದಿನ ಬಿಡುಗಡೆ. Gruha lakshmi 1st installment