ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯ( gruha jyothi status ) ಎರಡು ನೂರು ಯೂನಿಟ್ ಉಚಿತ ಈ ತಿಂಗಳಿನಿಂದ ಆರಂಭವಾಗಲಿದೆ ಈ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಹೌದು ರೈತ ಬಾಂಧವರೇ ಕರ್ನಾಟಕ ರಾಜ್ಯ ಸರ್ಕಾರದ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಸುವ ಸಲುವಾಗಿ ಯೋಜನೆಯನ್ನು ಜಾರಿಗೆ ತಂದು , ಜುಲೈ ತಿಂಗಳಲ್ಲಿ ಅರ್ಜಿ ಸಲ್ಲಿಸಲು ಆಹ್ವಾನ ಮಾಡಲಾಗಿತ್ತು.

Gruha jyothi
Gruha jyothi application status link

Gruha jyothi status ಚೆಕ್ ಮಾಡಲು ಇಲ್ಲಿದೆ ವಿಧಾನ.

ಅದರಂತೆ ಜುಲೈ 25ರ ಒಳಗೆ ರಾಜ್ಯದಲ್ಲಿ ಒಟ್ಟು ಒಂದು ಕೋಟಿ ಹದಿನೆಂಟು ಲಕ್ಷ ಜನರು ಅರ್ಜಿಯನ್ನು ಸಲ್ಲಿಸಿದ್ದು, ಈಗಾಗಲೇ ಅವರು ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ.

ಒಂದು ವೇಳೆ ನೀವು ಅರ್ಜಿ ಸಲ್ಲಿಸಿದ್ದರು ಸಹ ನಿಮಗೆ ಶೂನ್ಯ ವಿದ್ಯುತ್ ಬಾರದೆ ಇದ್ದಲ್ಲಿ, ಒಮ್ಮೆ ಈ ಲೇಖನದಲ್ಲಿ ಕೊಟ್ಟಿರುವಂತಹ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಂಡು ನಂತರ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ.

Gruha jyothi application status ನಿಮಗೆ ಬರಲಿಲ್ಲ ಎಂದರೆ, ಏನು ಮಾಡಬೇಕು?

ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದ ಎಲ್ಲಾ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ, ಆಗಸ್ಟ್ ಒಂದನೇ ತಾರೀಖಿನಿಂದ ಶೂನ್ಯ ವಿದ್ಯುತ್ ಬಿಲ್ ದೊರೆಯುತ್ತದೆ. ಒಂದು ವೇಳೆ ನೀವು ಜುಲೈ 25ರ ನಂತರ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ನಿಮಗೆ ಸೆಪ್ಟೆಂಬರ್ ಒಂದರಿಂದ ವಿದ್ಯುತ್ ಬಿಲ್ಲು ಉಚಿತವಾಗಿ ಅಂದರೆ ನಿಮ್ಮ ಬಳಕೆಯ ಮೇಲೆ ಹತ್ತು ಪ್ರತಿಶತ ಉಚಿತವಾಗಿ ಸಿಗುತ್ತದೆ.

ಗ್ರಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿಗಳನ್ನು ಅನುಸರಿಸಿ.

Gruha jyothi application status check ಮಾಡುವ ವಿಧಾನ.

ಹಂತ 1) ಮೊದಲಿಗೆ ನೀವು ರಾಜ್ಯ ಸರ್ಕಾರದ ಸೇವಾ ಸಿಂಧು ಜಾಲತಾಣಕ್ಕೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಿಸ್ಟ್ ದೊರೆಯುತ್ತದೆ. ಅದರಲ್ಲಿ ಗೃಹಜೋತಿ ಯೋಜನೆ ಮೇಲೆ ಕ್ಲಿಕ್ ಮಾಡಬೇಕು.

https://sevasindhugs.karnataka.gov.in/

Gruha jyothi seva sindhu
Gruha jyothi seva sindhu

ಹಂತ 2) ಎಡಭಾಗದಲ್ಲಿ ನಿಮಗೆ ಮೂರು ಗೆರೆಗಳುಳ್ಳ option ಕಾಣಿಸುತ್ತದೆ , ಅದರ ಮೇಲೆ ಕ್ಲಿಕ್ ಮಾಡಿದಾಗ ಕನ್ನಡದ ಅಕ್ಷರಗಳಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ( gruha jyothi status ) ಎಂದು ಬರೆದಿರಲಾಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

Gruha jyothi application status
Gruha jyothi application status

ಹಂತ 3) ನಂತರದಲ್ಲಿ ರಾಜ್ಯದ ನೀವು ಯಾವ ವಿದ್ಯುತ್ ಶಕ್ತಿ ನಿಗಮ ನಿಯಮಿತ ಕೆ( ESCOM , BESCOM, HESCOM, MESCOM, ) ಒಳಗೆ ಹೊಂದಿರುತ್ತೀರಿ ಎಂದು ಆಯ್ಕೆ ಮಾಡಿ ನಿಮ್ಮ ಕರೆಂಟ್ ವಿದ್ಯುತ್ ಬಿಲ್ ನ ಅಕೌಂಟ ಐಡಿಯನ್ನು( account I’d ) ನಮೂದಿಸಿ ಆಮೇಲೆ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.

ಹಂತ 4) ನಂತರದಲ್ಲಿ ನಿಮಗೆ ನೀವು ಸಲ್ಲಿಸಿದ ಅಪ್ಲಿಕೇಶನ್ ರೆಫರೆನ್ಸ್ ನಂಬರ್ ಕಾಣಿಸುತ್ತದೆ ಮತ್ತು ನೀವು ಬೃಹಜೋತಿ ಯೋಜನೆಗೆ ಯಾವಾಗ ಅರ್ಜಿ ಸಲ್ಲಿಸಿದ್ದೀರಿ ಎಂದು ದಿನಾಂಕ ಮತ್ತು ಸಮಯ ಕಾಣಿಸುತ್ತದೆ.

Gruha jyothi acknowledgment
Gruha jyothi acknowledgment

ಹಂತ 5) ಅದರ ಕೆಳಗಡೆ ಸ್ಟೇಟಸ್ ನಲ್ಲಿ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಅದು ಪ್ರೋಸೆಸಿಂಗ್ ನಲ್ಲಿದೆ( processing ) ಎಂದು ಇದ್ದಲ್ಲಿ, ನೀವು ಸಲ್ಲಿಸಿದ ಅರ್ಜಿ ಯಶಸ್ವಿಯಾಗಿದೆ ಎಂದು ಅರ್ಥ.

Related articles:

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Gruha jyothi application : ಒಂದೇ ದಿನಕ್ಕೆ 10 ಲಕ್ಷ ಅರ್ಜಿ ಸಲ್ಲಿಕೆ.

Anna bhagya dbt status check ವಿಧಾನ.