ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಉಚಿತ ಟ್ರೈನಿಂಗ್. Dairy farming and vermicompost manufacturing training.

Imageಆತ್ಮೀಯ ಕೃಷಿಕ ಮಿತ್ರರೇ ನಿಮಗೊಂದು ಸಂತಸದ ಸುದ್ದಿ. ರಾಜ್ಯ ಸರ್ಕಾರದ ಹಲವು ಕೃಷಿ ಇಲಾಖೆಗಳಿಂದ ಹೊರಡಿಸಿರುವ ಹೈನುಗಾರಿಕೆ ಮತ್ತು ತಯಾರಿಕೆ ತರಬೇತಿ ಅರ್ಜಿ ಆಹ್ವಾನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಕರ್ನಾಟಕ ಸರ್ಕಾರದಿಂದ ರೈತ ಯುವಕರಿಗೆ ಮತ್ತು 18ರಿಂದ 45 ವರ್ಷದ ಒಳಗಿನ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಹೈನುಗಾರಿಕೆ ಕೋಳಿ ಸಾಕಾಣಿಕೆ ಮತ್ತು ಎರೆಹುಳು ಗೊಬ್ಬರವನ್ನು ತಯಾರಿಕೆ ಮಾಡಲು ತರಬೇತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

Dairy farming and vermicompost training

ಗ್ರಾಮೀಣ ಭಾಗದ ಯುವಕ ಯುವತಿಯರು ಮತ್ತು ಕೃಷಿ ಚಟುವಟಿಕೆಗಳನ್ನು ಮಾಡುವ 18 ರಿಂದ 45 ವರ್ಷದೊಳಗಿನ ಯಾವುದೇ ವ್ಯಕ್ತಿಯು ಹೈನುಗಾರಿಕೆ ಮತ್ತು ತಯಾರಿಕೆ ತರಬೇತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ : ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ Laptop ವಿತರಣೆ. Free laptop scheme 2023

ತರಬೇತಿ ನೀಡುವ ಜೊತೆಗೆ ಒಟ್ಟು 10 ದಿನಗಳ ತರಬೇತಿಯಲ್ಲಿ ಊಟ ಮತ್ತು ವಸತಿಯನ್ನು ಶಿಬಿರಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ತರಬೇತಿ ಅಥವಾ ಟ್ರೈನಿಂಗ್ ಕೊನೆಯ ಹಂತದವರೆಗೂ ಉಳಿಯಲು ವಸತಿ ಮತ್ತು ಊಟ ಉಚಿತವಾಗಿ ನೀಡಲಾಗುತ್ತಿದೆ.

ಯಾವೆಲ್ಲಾ ತರಬೇತಿ ಇವೆ. ಇಲ್ಲಿ ನೋಡಿ.

ಯಾವೆಲ್ಲಾ ತರಬೇತಿಗಳು ಇರಲಿವೆ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ತಿಳಿದುಕೊಳ್ಳೋಣ.

1) ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ, ಒಟ್ಟು ಹತ್ತು ದಿನಗಳ ತರಬೇತಿ ಇರುತ್ತದೆ ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನಾಂಕವಾಗಿರುತ್ತದೆ.

ಇದನ್ನೂ ಓದಿ : ಒಂದು ಲಕ್ಷದವರೆಗೆ ಕೃಷಿ ಸಾಲ ಮನ್ನಾ ಘೋಷಣೆ…? ನಿಜಾನಾ ಸುಳ್ಳಾ? ಇಲ್ಲಿದೆ ಮಾಹಿತಿ. Crop loan waiver

2) ಫೋಟೋಗ್ರಾಫಿ ಮತ್ತು ವಿಡಿಯೋ ಗ್ರಾಫಿ ತರಬೇತಿಗಾಗಿ 30 ದಿನಗಳ ತರಬೇತಿ ಇದ್ದು ಆಗಸ್ಟ್ 25ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ.

3) ಫಾಸ್ಟ್ ಫುಡ್ ಸ್ಟಾಲ್ ಉದ್ಯಮ ನಡೆಸಲು ಇತರಬೇತಿಗಾಗಿ ಹತ್ತು ದಿನಗಳ ತರಬೇತಿರಲಿದ್ದು ಇದಕ್ಕೆ ಅರ್ಜಿ ಸಲ್ಲಿಸಲು ಅಗಸ್ಟ್ 30ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ.

4) ಮೊಬೈಲ್ ರಿಪೇರಿ ಮತ್ತು ಸರ್ವಿಸ್ ತರಬೇತಿಯನ್ನು ಪಡೆದುಕೊಳ್ಳಲು ಒಟ್ಟು 30 ದಿನಗಳ ತರಬೇತಿಯ ಅವಕಾಶವಿದ್ದು ಇದಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆ ದಿನಾಂಕವಾಗಿದೆ.

ಅರ್ಜಿಗಳನ್ನು ಸಲ್ಲಿಸಲು ಬೇಕಾಗುವ ದಾಖಲೆ ಏನೇನು?

ಅರ್ಜಿಯನ್ನು ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಇವುಗಳನ್ನು ತಮ್ಮ ಪಾಸ್ಪೋರ್ಟ್ ಅಳತಿಯ ಭಾವಚಿತ್ರದೊಂದಿಗೆ ಹಾವೇರಿ ಜಿಲ್ಲೆಯ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್: 8660219375 ಸಂಪರ್ಕ ಮಾಡಬಹುದು.

ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿ ಪಟ್ಟಿ ಬಿಡುಗಡೆ. Pm kisan beneficiary status

ಮೊಬೈಲ್ ನಲ್ಲಿ ಸುಲಭವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ.