ಒಂದು ಲಕ್ಷದವರೆಗೆ ಕೃಷಿ ಸಾಲ ಮನ್ನಾ ಘೋಷಣೆ…? ನಿಜಾನಾ ಸುಳ್ಳಾ? ಇಲ್ಲಿದೆ ಮಾಹಿತಿ. Crop loan waiver

ಆತ್ಮೀಯ ರೈತ ಬಾಂಧವರಿಗೆ ನಮ್ಮ ಕೃಷಿ ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ. ಈ ಲೇಖನದಲ್ಲಿ ಇಂದು ನಾವು ಒಂದು ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಬಗ್ಗೆ ( crop loan waiver ) ಮಾಹಿತಿಯನ್ನು ತಿಳಿದುಕೊಳ್ಳೋಣ.

 

ನಿಮಗೆಲ್ಲ ತಿಳಿದಿರುವ ಹಾಗೆ ರೈತರ ಕೃಷಿ ಸಾಲ ಮನ್ನಾವನ್ನು ಈ ಮೊದಲು 2018ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿ ಅವರು ಒಂದು ಲಕ್ಷದವರೆಗೆ ರಾಜ್ಯದ ಎಲ್ಲಾ ಕೃಷಿ ರೈತರ ಸಾಲವನ್ನು ಮನ್ನಾ ಮಾಡಿದ್ದರು.

ಕೃಷಿ ಸಾಲ ಮನ್ನಾ ಆಗಿಲ್ಲ.

ಅದರಂತೆ ಆ ಸಮಯದಲ್ಲಿ ಅರ್ಹವುಳ್ಳ ಎಲ್ಲಾ ರೈತರ ಸಾಲ ಮನ್ನಾ ಆಗಿದ್ದವು. ಇನ್ನೂ ಕೆಲ ರೈತರ ಸಾಲ ಮನ್ನಾ ಕೆಲವು ತಾಂತ್ರಿಕ ದೋಷಗಳಿಂದ ಮತ್ತು ರೈತರ ದಾಖಲಾತಿಗಳ ಕೊರತೆಗಳಿಂದ ಸಾಲ ಮನ್ನಾ ಆಗಿರುವುದಿಲ್ಲ.

ಇದಾದ ನಂತರ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಯಾವುದೇ ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಮಾಹಿತಿಯಾಗಲಿ ಘೋಷಣೆಯನ್ನಾಗಿ ಮಾಡಿರುವುದಿಲ್ಲ.

ಯಾವುದೇ ಸುಳ್ಳು ಮಾಹಿತಿಗೆ ಬಲಿ ಆಗಬೇಡಿ.

2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿಕೊಂಡಂತಹ, ಪಂಚ ಯೋಜನೆಗಳ ಬಗ್ಗೆ ಮಾತ್ರ ಘೋಷಣೆಗಳನ್ನು ಮಾಡಿದ್ದು ಇನ್ನಿತರ ಕೃಷಿಕರ ಯಾವುದೇ ಬ್ಯಾಂಕಿನ ಮತ್ತು ಸೊಸೈಟಿಗೆ ಸಾಲವನ್ನು ಮನ್ನಾ ಮಾಡುವ ಘೋಷಣೆಯನ್ನು ಅಥವಾ ಮಾಹಿತಿಯನ್ನು ಹೇಳಿರುವುದಿಲ್ಲ.

ಮೊಬೈಲ್ ನಲ್ಲಿ ಸುಲಭವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ.

ಇತ್ತೀಚಿನ ದಿನಗಳಲ್ಲಿ ಕೆಲವು ನಕಲಿ ವೆಬ್ಸೈಟ್ಗಳ ಹಾವಳಿಗಳಿಂದ ಕೃಷಿಕರಿಗೆ ಅನಗತ್ಯ ವಿಷಯಗಳು ಮತ್ತು ನಕಲಿ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಇದೇ ರೀತಿ ಒಂದು ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಘೋಷಣೆ ಎಂದು, ಮಾಹಿತಿಯನ್ನು ಹರಿ ಬಿಡಲಾಗುತ್ತಿದೆ.

ಆತ್ಮೀಯ ರೈತ ಬಾಂಧವರೇ ನಿಮ್ಮಲ್ಲಿ ವಿನಂತಿಯೇನೆಂದರೆ, ಅಧಿಕೃತವಾಗಿ ಸರ್ಕಾರದಿಂದ ಘೋಷಣೆ ಮಾಡಿದಂತಹ ಮತ್ತು ನಿಖರವಾದ ಲಿಖಿತ ರೂಪದಲ್ಲಿ ಯೋಜನೆಗಳನ್ನು ಹೊರಡಿಸಿದಂತಹ ಮಾಹಿತಿಗಳನ್ನು ಮಾತ್ರವೇ ಪರಿಗಣಿಸಬೇಕು.

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ Laptop ವಿತರಣೆ. Free laptop scheme 2023

ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮತ್ತು ನಕಲಿ ವೆಬ್ಸೈಟ್ಗಳ ಸುಳ್ಳು ಮಾಹಿತಿಗಳನ್ನು ನಂಬಿ ಮೋಸ ಹೋಗದಿರಿ. ನಿಮಗೆ ಓದಲು ಮತ್ತು ಬರೆಯಲು ಬಾರದೇ ಇದ್ದಲ್ಲಿ ನಿಮ್ಮ ಮನೆಯ ವಿದ್ಯಾವಂತ ಮಕ್ಕಳು ಅಥವಾ ನೆರೆಹೊರೆಯವರ ಹತ್ತಿರ ಇಲ್ಲವೇ ಹತ್ತಿರದ ಕೃಷಿ ಇಲಾಖೆ, ಗ್ರಾಮವನ್ ಕೇಂದ್ರಗಳಲ್ಲಿ, ವಿಚಾರಿಸಿ ಮಾಹಿತಿಯನ್ನು ತಿಳಿದುಕೊಳ್ಳಿ.

ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿ ಪಟ್ಟಿ ಬಿಡುಗಡೆ. Pm kisan beneficiary status

ಈ ಲೇಖನವು ನಿಮಗೆ ಇಷ್ಟವಾದಲ್ಲಿ ತಕ್ಷಣವೇ ನಿಮ್ಮ ಕೃಷಿ ಬಾಂಧವರಿಗೆ ವಾಟ್ಸಪ್ ಮೂಲಕ ಶೇರ್ ಮಾಡಿ. ರೈತರು ಮೋಸ ಹೋಗುವುದನ್ನು ತಪ್ಪಿಸಿರಿ ಧನ್ಯವಾದಗಳು.

ಕೃಷಿ ಹೊಂಡ ನಿರ್ಮಾಣ ಮಾಡಲು 72000 ಸಹಾಯಧನ. ಅರ್ಜಿ ಆಹ್ವಾನ. Agricultural pits