Anna bhagya dbt status check ವಿಧಾನ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ಜಾಲತಾಣಕ್ಕೆ ಸ್ವಾಗತ ಇಂದು ಈ ಲೇಖನದಲ್ಲಿ ನಾವು ಅನ್ನಭಾಗ್ಯ ಯೋಜನೆಯ ಟಿ ಬಿ ಟಿ ಸ್ಟೇಟಸ್( anna bhagya dbt status check ) ಹೇಗೆ ತಿಳಿದುಕೊಳ್ಳುವುದು ಎಂದು ನೋಡೋಣ.

ನಿಮಗೆಲ್ಲಾ ತಿಳಿದಿರುವ ಹಾಗೆ 2023ರ ಚುನಾವಣೆ ನಂತರ ಜಾರಿಗೆಗೋಳಿಸಿದಂತಹ ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಅನ್ನ ಭಾಗ್ಯ ಯೋಜನೆ ಯಾಗಿದೆ.

Anna bhagya dbt status check ಮಾಡಿ.

ಅನ್ನಭಾಗ್ಯ ಯೋಜನೆಯ ರಾಜ್ಯದ ಕೋಟ್ಯಂತರ ಬಿಪಿಎಲ್ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಯ ಕುಟುಂಬ, ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ಅಕ್ಕಿ ಅಥವಾ ಧನಸಹಾಯ ನೀಡುವ ಗುರಿ ಇದಾಗಿದೆ.

ಅನ್ನಭಾಗ್ಯ ಯೋಜನೆಗೆ ಈಗಾಗಲೇ ಚಾಲ್ತಿಯಲ್ಲಿರುವಂತಹ ಪಡಿತರ ಚೀಟಿ ಮತ್ತು ಪಡಿತರ ಚೀಟಿಗೆ ಲಿಂಕ್ ಮಾಡಿದಂತಹ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ.

Anna bhagya scheme ಹಣ ಈಗಾಗಲೇ ಜಮಾ.

ಈಗಾಗಲೇ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ಪಡಿತರ ಚೀಟಿ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿದ್ದು, ಅದರ ಲಾಭವನ್ನು ಲಕ್ಷಾಂತರ ಜನ ಪಡೆದುಕೊಂಡಿದ್ದಾರೆ.

ಈಗ ನಾವು ನಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗುವ ಕುರಿತು ಮತ್ತು ಆಗಿರುವ ಕುರಿತು ಸ್ಟೇಟಸ್ ಅನ್ನು ಕೊಟ್ಟಿರೋ ಲಿಂಕ್ ಬಳಸಿ ತಿಳಿದುಕೊಳ್ಳಬಹುದು.

ಕೆಳಗೆ ಕೊಟ್ಟಿರುವ anna bhagya amount check ಮಾಡುವ link ಒತ್ತಿರಿ.

1) ಮೊದಲಿಗೆ ನೀವು ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಆದಂತಹ ಆಹಾರ ಮತ್ತು ಸರಬರಾಜು ಇಲಾಖೆ ಪೋರ್ಟಲ್ಲ್ಲಿಗೆ ಭೇಟಿ ಮಾಡಬೇಕು, ಅಥವಾ ಕ್ಲಿಕ್ ಮಾಡಬೇಕು.

https://ahara.kar.nic.in/Home/Eservices

2) ನಂತರ ನಿಮಗೆ ಅಧಿಕೃತ ಜಾಲತಾಣದ ಮುಖಪುಟ ತೆರೆದುಕೊಂಡ ಮೇಲೆ ಎಡ ಭಾಗದಲ್ಲಿ ಮೂರು ಗೆರೆಗಳು ಗೋಚರಗೊಳ್ಳುತ್ತವೆ, ಅದರ ಮೇಲೆ ಕ್ಲಿಕ್ ಮಾಡಬೇಕು.

3) ಎಡಗಡೆ ಭಾಗದಲ್ಲಿ ನಿಮಗೆ ಹಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಮೊದಲಿಗೆ ಈ ರೇಷನ್ ಕಾರ್ಡ್ ( e-rationcard ) , ಮತ್ತು e-status ಎಂಬ ಆಯ್ಕೆ ಇರುತ್ತವೆ.

ahara.kar.nic.in website ಒಳ್ಗೆ ಮಾಹಿತಿ ಲಭ್ಯ.

4) ಅದರಲ್ಲಿ ನೀವು ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಲು ಈ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ರೇಷನ್ ಕಾರ್ಡ್ ಸ್ಟೇಟಸ್ ಮೊಡ್ಯೂಲ್ ( ration card status module ) ಅಂತ ಬರೆದಿರುವ ಮುಖಪುಟ ತೆರೆದುಕೊಳ್ಳುತ್ತದೆ.

5) ಕೆಳಗೆ ಕಾಣಿಸುವ ಆಯ್ಕೆಯಲ್ಲಿ ನೀವು ಯಾವ ಜಿಲ್ಲೆಯ ವ್ಯಾಪ್ತಿಗೆ ಹೊಂದಿದ್ದೀರಿ ಎಂದು ನೋಡಿಕೊಂಡು ನೀಲಿಬಣ್ಣದ ಅಕ್ಷರಗಳಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

6) ನಂತರದಲ್ಲಿ ನಿಮಗೆ ಸುಮಾರು ಆಯ್ಕೆಗಳು ಇರುವ ಮುಖಪುಟ ತೆಗೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಅಪ್ಲಿಕೇಶನ್ ಸ್ಟೇಟಸ್ ಆಫ್ ನ್ಯೂ ರೇಷನ್ ಕಾರ್ಡ್ ( application status of new ration card ) ಎಂದು ಇರುತ್ತದೆ.

7) ಕೊನೆಯ ಆಯ್ಕೆಯಲ್ಲಿ ನಿಮಗೆ ಸ್ಟೇಟಸ್ ಆಫ್ ಡಿಬಿಟಿ( status of dbt ) ಎಂದು ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಯಾವ ವರ್ಷ ಮತ್ತು ಯಾವ ತಿಂಗಳು ಹಾಗೂ rcನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ( ration card number ) ತುಂಬುವ ಖಾನೆ ಇರುತ್ತವೆ.

8) ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಅನ್ನಭಾಗ್ಯ ಡಿಪಿ ಸ್ಟೇಟಸ್ ದೊರೆಯುತ್ತದೆ. ಮತ್ತು ನಿಮ್ಮ ನಂಬರ್ ಗೆ ಸಂದೇಶ ಕೂಡ ಬರುತ್ತದೆ.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Gruha lakshmi application : ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್.

Gruha lakshmi application : ಸಲ್ಲಿಸಲು ಈ ಸಂಖ್ಯೆಗೆ ಸಂದೇಶ ಕಳಿಸಿ.

ಯುವನಿಧಿ ಯೋಜನೆ ಯಾರಿಗೆ ಸಿಗುತ್ತೆ? Yuva nidhi application form ಯಾವಾಗ ಬಿಡ್ತಾರೆ?

Pm kisan 14th installment date : ಪ್ರಕಟ ಆಗಿದೆ.